ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಪರಿಣಾಮ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಬ್ದ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸ್ಪರ್ಶ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ರೂಪ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ರಸ ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಗಂಧ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಉತ್ತರವಾತುಲಾಗಮೇ:
ಓಂಕಾರ ಜ್ಯೋತಿರೂಪೇಚ ತೃಪ್ತಿಶ್ಚೈವಸಮುದ್ಭವಾ |
ಓಂಕಾರ ದರ್ಪಣಾಕಾರೇ ಶಬ್ದಶ್ಚೈವಂ ಸಮುದ್ಭವಃ ||
ಓಂಕಾರ ಅರ್ಧಚಂದ್ರೇ ಚ ಸ್ಪರ್ಶನಂ ಚ ಸಮುದ್ಭವಂ |
ಓಂಕಾರ ಕುಂಡಲಾಕಾರೇ ರೂಪಂ ಚೈವಂ ಸಮುದ್ಭವಂ ||
ಓಂಕಾರದಂಡರೂಪೇಚ ರಸಶ್ಚ್ಯೆವ ಸಮುದ್ಭವಃ |
ಓಂಕಾರತಾರಕಾರೂಪೇ ಗಂಧಶ್ಚೈವ ಸಮುದ್ಭವಃ ||
ಇತಿ ಷಷ್ಠದ್ರವ್ಯಂ ಚೈವ ಸ್ಥಾನ ಸ್ಥಾನೇ ಸಮುದ್ಭವಃ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā akhaṇḍa jyōtirmayavāgiha gōḷakākārapraṇavada
jyōtisvarūpadalli pariṇāma utpatyavāyittu.
Ā praṇavada darpaṇākāradalli śabda utpatyavāyittu.
Ā praṇavada ardhacandrakadalli sparśa utpatyavāyittu.
Ā praṇavada kuṇḍalākāradalli rūpa utpatyavāyittu.
Ā praṇavada daṇḍakasvarūpadalli rasa utpatyavāyittu.
Ā praṇavada tārakasvarūpadalli gandha utpatyavāyittu nōḍā.
Idakke uttaravātulāgamē:
Ōṅkāra jyōtirūpēca tr̥ptiścaivasamudbhavā |
ōṅkāra darpaṇākārē śabdaścaivaṁ samudbhavaḥ ||
ōṅkāra ardhacandrē ca sparśanaṁ ca samudbhavaṁ |
ōṅkāra kuṇḍalākārē rūpaṁ caivaṁ samudbhavaṁ ||
ōṅkāradaṇḍarūpēca rasaścyeva samudbhavaḥ |
ōṅkāratārakārūpē gandhaścaiva samudbhavaḥ ||
iti ṣaṣṭhadravyaṁ caiva sthāna sthānē samudbhavaḥ ||''
intendudāgi, apramāṇakūḍalasaṅgamadēvā