Index   ವಚನ - 488    Search  
 
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಾಸ್ವರೂಪದಲ್ಲಿ ಋಗ್ವೇದ ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಸ್ವರೂಪದಲ್ಲಿ ಯಜುರ್ವೇದ ಹುಟ್ಟಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ಸಾಮವೇದ ಹುಟ್ಟಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಅಥರ್ವಣವೇದ ಹುಟ್ಟಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಗಾಯತ್ರಿ ಉತ್ಪತ್ಯವಾಯಿತ್ತು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಅಜಪೆ ಹುಟ್ಟಿತು ನೋಡಾ. ಇದಕ್ಕೆ ಶಿವಧರ್ಮೋತ್ತರೇ: ಓಂಕಾರಜ್ಯೋತಿರೂಪೇ ಚ ಅಜಪಾತ್ಮತ್ರ ಜಾಯತೇ | ಓಂಕಾರ ದರ್ಪಣಾಕಾರೇ ಗಾಯತ್ರೀ ಚ ಸಮುದ್ಭವಾ || ಓಂಕಾರ ಅರ್ಧಚಂದ್ರೇ ಚ ಅಥರ್ವಣಂಚಾತ್ರಜಾಯತೇ | ಓಂಕಾರ ಕುಂಡಲಾಕಾರೇ ಸಾಮವೇದಾಶ್ಚ ಜಾಯತೇ || ಓಂಕಾರ ದಂಡರೂಪೇ ಚ ಯಜುರ್ವೇದಶ್ಚ ಜಾಯತೇ | ಓಂಕಾರ ತಾರಕಾರೂಪೇ ಋಗ್ವೇದಃ ತತ್ರ ಜಾಯತೇ | ಏವಂ ಸಮುತ್ಪನ್ನಾಃ ಸುಸೂಕ್ಷ್ಮಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.