Index   ವಚನ - 493    Search  
 
ಅಲ್ಲಿಂದ ಮೇಲೆ ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ, ಅಪ್ಪುವೆಂಬ ಮಹಾಭೂತ. ಆ ಚಕ್ರ ಧನುರ್ಗತಿಯಾಕಾರ, ಷಡ್ದಳ ಪದ್ಮ. ಆ ಪದ್ಮ ಪಚ್ಚೆಯವರ್ಣ, ಅಲ್ಲಿಯ ಅಕ್ಷರ- `ಬ ಭ ಮ ಯ ರ ಲ'- ಎಂಬ ಷಡಕ್ಷರ ನ್ಯಾಸವಾಗಿಹುದು. ಅಲ್ಲಿ ಶ್ವೇತವರ್ಣವಾಗಿಹ ವಾಮದೇವಮುಖವನುಳ್ಳ ಗುರುಲಿಂಗ. ಆ ಲಿಂಗಕ್ಕೆ ಪ್ರತಿಷ್ಠೆಕಲೆ, ಅಲ್ಲಿ ಕರ್ತೃಸಾದಾಖ್ಯ, ಉತ್ತರ ದಿಕ್ಕು, ಅಲ್ಲಿ ವೀಣಾನಾದ. ರಾಕಿನಿಯೆಂಬ ಪರಿಯಾಯ ನಾಮವನುಳ್ಳ ಜ್ಞಾನಶಕ್ತಿ ಸುಬುದ್ಧಿಯೆಂಬ ಹಸ್ತದಿಂ ಲಿಂಗದ ಜಿಹ್ವೆಯೆಂಬ ಮುಖಕ್ಕೆ ರಸದ್ರವ್ಯವನು ನೈಷ್ಠಿಕಾಭಕ್ತಿಯಿಂದ ಯಜುರ್ವೆದವನುಚ್ಚರಿಸುತ್ತ ಅರ್ಪಿಸುವಳು. ವಿಷ್ಣು ಪೂಜಾರಿ, ಲಿಂಗಕ್ಷೇತ್ರವೆಂಬ ಸಂಜ್ಞೆ; ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಮಕಾರವೆಂಬ ಬೀಜಾಕ್ಷರ. ಅದು ಪ್ರಣವದ ದಂಡಸ್ವರೂಪದಲ್ಲಿಹ ಮಕಾರದಲ್ಲಿಹುದಾಗಿ ಆ ಈ ಊ ಏಂ ಓಂ ಮಾಂ ಎಂಬ ಬ್ರಹ್ಮನಾದಮಂತ್ರಮೂರ್ತಿಪ್ರಣವದ ಶಿರೋಮಧ್ಯದಲ್ಲಿಹ ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ ನಮಸ್ಕಾರವು ನೋಡಾ. ಇದಕ್ಕೆ ಈಶ್ವರೋsವಾಚ: ಲಿಂಗೇ ಸ್ವಾಧಿಷ್ಠಚಕ್ರಂತು ಭೂತಮಾಪಃ ಧನುಃಕೃತಿಃ | ಪದ್ಮಂ ಷಡ್ದಳಂ ಚೈವ ಷಡಕ್ಷರಸ್ಥಿತಂ ತಥಾ | ವರ್ಣಾಯ ಪಶ್ಚಯೋಶ್ಚೈವ ಅಧಿದೈವಂ ಹರಿಸ್ಮೃತಂ | ಬೀಜಾಕ್ಷರ ಮಕಾರಂಚ ರಾಕಿನೀಶಕ್ತಿ ರೇವ ಚ | ವೀಣಾನಾದ ಗುದೋರ್ಲಿಂಗಂ ತಿಷ್ಟತಿ ಶ್ರುಣು ಪಾರ್ವತೀ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.