Index   ವಚನ - 523    Search  
 
ಭೂಮಿಯೆ ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಲ್ಲಿ ಆಚಾರಲಿಂಗಕ್ಕೆ ಘ್ರಾಣವೆಂಬ ಮುಖದಲ್ಲಿ ಗಂಧವನೆ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಈಶ್ವರೋsವಾಚ: ಚಿತ್ತಹಸ್ತೇ ಚ ಭೂಮ್ಯಾಂಗೌ ಭಕ್ತಶ್ಚಾಚಾರಲಿಂಗಕಂ | ಘ್ರಾಣೀ ಚ ತನ್ಮುಖೇ ಗಂಧಂ ಅರ್ಪಿತಂ ತೃಪ್ತಿಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.