Index   ವಚನ - 568    Search  
 
ಸ್ಥೂಲತನುವಿನಲ್ಲಿ ಇಷ್ಟಲಿಂಗ ಸ್ವಾಯತವಾಗಿಹುದು. ಸೂಕ್ಷ್ಮತನುವಿನಲ್ಲಿ ಪ್ರಾಣಲಿಂಗ ಸ್ವಾಯತವಾಗಿಹುದು. ಕಾರಣತನುವಾದ ಆತ್ಮಾಂಗದಲ್ಲಿ ಭಾವಲಿಂಗ ಸ್ವಾಯತವಾಗಿಹುದು ನೋಡಾ. ಇದಕ್ಕೆ ಮಹಾಲಿಂಗಾಗಮೇ: ಇಷ್ಟಲಿಂಗಂತು ಬಾಹ್ಯಾಂಗೇ ಪ್ರಾಣಲಿಂಗಂ ತಥಾಂತರೇ | ಭಾವಲಿಂಗಂ ಸದೈವಾತ್ಮಾ ಸ್ವಾಂಗೇsಸ್ಮಿನ್ ಸುಪ್ರತಿಷ್ಠಿತಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.