Index   ವಚನ - 570    Search  
 
ಜ್ಞಾನೇಂದ್ರಿಯವೆಂಬ ಅಂಗಂಗಳಲ್ಲಿ ಲಿಂಗಸ್ವಾಯತವಾಗಿಹುದು. ಆ ಕ್ರಮದಿಂದವೆ, ಆ ಕರ್ಮೇಂದ್ರಿಯಂಗಳೆಂಬ ಅಂಗಂಗಳಲ್ಲಿಯೂ ಲಿಂಗಸ್ವಾಯತವಾಗಿಹುದು ನೋಡಾ. ಇದಕ್ಕೆ ಶಿವಲಿಂಗಾಗಮೇ: ಯಥಾ ಜ್ಞಾನೇಂದ್ರಿಯಾಂಗೇಷು ಕ್ರಮಾಲ್ಲಿಂಗಂ ಪ್ರತಿಷ್ಠಿತಂ | ತಥಾ ಕರ್ಮೇಂದ್ರಿಯಾಂಗೇಷು ಕ್ರಮಾಲ್ಲಿಂಗಂ ಪ್ರತಿಷ್ಠಿತಂ ||'' ಇಂತೆಂದುದಾಗಿ, ಅಪ್ರಮಾಣಕೂಡಸಂಗಮದೇವಾ.