Index   ವಚನ - 590    Search  
 
ಮರ್ತ್ಯಲೋಕದ ಮಹಾಗಣಂಗಳೆಲ್ಲ ತಾನಿರ್ದಲ್ಲಿ, ನಾಗಲೋಕದ ನಾಗಗಣಂಗಳೆಲ್ಲ ತಾನಿರ್ದಲ್ಲಿ, ದೇವಲೋಕದ ದೇವಗಣಂಗಳೆಲ್ಲ ತಾನಿರ್ದಲ್ಲಿ, ರುದ್ರಲೋಕದ ರುದ್ರಗಣಂಗಳೆಲ್ಲ ತಾನಿರ್ದಲ್ಲಿ, ಭೃಂಗಿ ವೀರೇಶ್ವರ ನಂದಿ ಮಹಾಕಾಳರೆಂಬ ಮಹಾಗಣಂಗಳೆಲ್ಲ ತಾನಿರ್ದಲ್ಲಿ, ತನ್ನಿಂದಧಿಕವಪ್ಪ ಪರತತ್ವವಿಲ್ಲವಾಗಿ ತಾನೆ ಸ್ವಯಂಭು ನಿರಾಳ ನೋಡಾ ಅಪ್ರಮಾಣಕೂಡಲಸಂಗಮದೇವಾ.