Index   ವಚನ - 615    Search  
 
ಆ ಅಖಂಡಮಹಾಜ್ಯೋತಿಪ್ರಣವದ ದರ್ಪಣಾಕಾರವಾಗಿಹ ವಿಜ್ಞಾನಬ್ರಹ್ಮದಲ್ಲಿ ಸದಾಶಿವ, ಮಹಾಕಾಶ, ಶಬ್ದ, ಜ್ಞಾನ, ಶ್ರೋತ್ರ, ವಾಕು ಈ ಆರು ತತ್ವಂಗಳು ಹುಟ್ಟಿತ್ತು ನೋಡಾ. ಇದಕ್ಕೆ ನಿರಂಜನಾಗಮೇ: ಸದಾಶಿವಂ ಮಹಾಕಾಶಂ ಶಬ್ದಜ್ಞಾನಂ ಚ ಶ್ರೋತ್ರಕಂ | ವಾಕ್ತಥಾ ಷಡ್ವಿಧಂ ಪ್ರೋಕ್ತಂ ವಿಜ್ಞಾನಂ ಬ್ರಹ್ಮ ಉಚ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.