ಆ ಅಖಂಡಮಹಾಜ್ಯೋತಿಪ್ರಣವದ ಕುಂಡಲಾಕಾರವಾಗಿಹ
ಕಲಾಬ್ರಹ್ಮದಲ್ಲಿ ರುದ್ರ, ಅಗ್ನಿ, ರೂಪ,
ಅಹಂಕಾರ, ನೇತ್ರ, ಪಾದೇಂದ್ರಿಯವೆಂಬ
ಈ ಆರು ತತ್ವಂಗಳು ಉತ್ಪತ್ಯವಾಯಿತು ನೋಡಾ.
ಇದಕ್ಕೆ ನಿರಂಜನಾತೀತಾಗಮೇ:
ರುದ್ರಂ ತೇಜಸ್ತಥಾ ರೂಪಂ ಮಹಾನೇತ್ರಂ ಚ ಪಾದಯೋಃ |
ಷಡಂಗಮಿಶ್ರಿತಂ ಚೇತಿ ಕಲಾಬ್ರಹ್ಮೇತಿ ಕಥ್ಯತೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā akhaṇḍamahājyōtipraṇavada kuṇḍalākāravāgiha
kalābrahmadalli rudra, agni, rūpa,
ahaṅkāra, nētra, pādēndriyavemba
ī āru tatvaṅgaḷu utpatyavāyitu nōḍā.
Idakke niran̄janātītāgamē:
Rudraṁ tējastathā rūpaṁ mahānētraṁ ca pādayōḥ |
ṣaḍaṅgamiśritaṁ cēti kalābrahmēti kathyatē ||''
intendudāgi, apramāṇakūḍalasaṅgamadēvā.