Index   ವಚನ - 619    Search  
 
ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ ಮೂರ್ತಿಬ್ರಹ್ಮದಲ್ಲಿ ಬ್ರಹ್ಮ, ಪೃಥ್ವಿ, ಗಂಧ, ಚಿತ್ತ, ಘ್ರಾಣ, ಗುದವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ: ಧಾತಾ ಧಾತ್ರೀ ಚ ಗಂಧಶ್ಚ ಚಿತ್ತಂ ಘ್ರಾಣಗುದಸ್ತಥಾ | ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮೇತಿ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.