Index   ವಚನ - 621    Search  
 
ಚಿಚ್ಛಕ್ತಿ ಪರಾಶಕ್ತಿ ಆದಿಶಕ್ತಿ ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಈ ಷಡುಶಕ್ತಿಗಳು ಸರ್ವತತ್ವಕ್ಕೂ ಕಾರಣವಾಗಿಹವು ನೋಡಾ. ಇದಕ್ಕೆ ಉತ್ತರವಾತುಲಾಗಮೇ: ಚಿಚ್ಛಕ್ತಿಃ ಪರಾಶಕ್ತಿ ಆದಿಶಕ್ತಿ ಸ್ತಥೈವ ಚ | ಇಚ್ಛಾಜ್ಞಾನಕ್ರಿಯಾಶಕ್ತಿ ಸರ್ವತತ್ವಂತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.