Index   ವಚನ - 623    Search  
 
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಕ್ಷೇತ್ರಜ್ಞನು ಈ ಆರು ಭೂತಾಂಗವು ಪರಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಭೂಜಲಾಗ್ನಿಮರುದ್ಯೋಮ ಕ್ಷೇತ್ರಜ್ಞಾನಶ್ಚ ದೇವ ಹಿ | ಭೂತಾಂಗಂ ಚ ಮಿದಂ ಪ್ರೋಕ್ತಂ ಪರಾಶಕ್ತಿಶ್ಚ ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.