Index   ವಚನ - 632    Search  
 
ಶಿವತತ್ವದ ತೇಜದ ಮೇಲೆ ನಿರಾಳ ಮಣಿಪೂರ ಚಕ್ರ. ಅಲ್ಲಿಯ ಪದ್ಮ ಮುನ್ನೂರರುವತ್ತು ದಳದ ಪದ್ಮ; ಆ ಪದ್ಮದ ವರ್ಣ ಉಪಮಾತೀತವು. ಅಲ್ಲಿಯ ಅಕ್ಷರ ಮುನ್ನೂರರುವತ್ತಕ್ಷರ; ಆ ಅಕ್ಷರ ರೂಪಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಳಶಿವಶಕ್ತಿ. ನಿರಂಜನಬ್ರಹ್ಮವೇ ಅಧಿದೇವತೆ. ಅಲ್ಲಿಯ ನಾದ ಬ್ರಹ್ಮನಾದ. ಅಲ್ಲಿಯ ಬೀಜಾಕ್ಷರ ಮಕಾರ ನೋಡಾ ಅಪ್ರಮಾಣಕೂಡಲಸಂಗಮದೇವಾ.