Index   ವಚನ - 634    Search  
 
ಶಿವತತ್ತ್ವದ ಆಕಾಶದ ಮೇಲೆ ನಿರಾಳ ವಿಶುದ್ಧಿಚಕ್ರ. ಅಲ್ಲಿಯ ಪದ್ಮ ನೂರಯೆಂಬತ್ತು ದಳದಪದ್ಮ. ಆ ಪದ್ಮ ವರ್ಣಾತೀತವಾಗಿಹುದು. ಅಲ್ಲಿಯ ಅಕ್ಷರ ನೂರಯೆಂಬತ್ತಕ್ಷರ; ಆ ಅಕ್ಷರ ರೂಪಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಳಮನೋನ್ಮನಿಶಕ್ತಿ. ಸಕಲನಿಃಕಲಾತೀತಬ್ರಹ್ಮವೇ ಅಧಿದೇವತೆ. ಅಲ್ಲಿಯ ನಾದ ಮಹಾನಾದ. ಅಲ್ಲಿಯ ಬೀಜಾಕ್ಷರ ಅನಾದಿಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.