ನಿರಂಜನಾತೀತಶರಣಂಗೆ ನಿರಂಜನಾತೀತವೆ ಅಂಗ,
ನಿರಂಜನಾತೀತವೆ ಹಸ್ತ, ನಿರಂಜನಾತೀತವೆ ಪ್ರಸಾದಲಿಂಗ.
ನಿರಂಜನಾತೀತವೆಂಬ ಮುಖದಲ್ಲಿ
ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವಂ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Niran̄janātītaśaraṇaṅge niran̄janātītave aṅga,
niran̄janātītave hasta, niran̄janātītave prasādaliṅga.
Niran̄janātītavemba mukhadalli
niran̄janātītānandavemba sukhava samarpaṇavaṁ māḍi,
tr̥ptiyane bhōgisuvanu nōḍā
apramāṇakūḍalasaṅgamadēvā.