ಸ್ವಪ್ನವಾವುದು?
ಶ್ರೋತ್ರಾದಿಗಳೈದು, ವಾಗಾದಿಗಳೈದು
-ಈ ಹತ್ತು ಕರಣಂಗಳು ಭ್ರೂಮಧ್ಯದಲ್ಲಿ ನಿಂದು
ಶಬ್ದಾದಿಗಳೈದು, ವಚನಾದಿಗಳೈದು, ವಾಯು ಹತ್ತು ,
ಕರಣ ನಾಲ್ಕು, ಪುರುಷನೊಬ್ಬ-
ಈ ಇಪ್ಪತ್ತೈದು ಕರಣಂಗಳೊಡನೆ ಕಂಠಸ್ಥಾನದಲ್ಲಿ ನಿಂದು
ಗಗನಕ್ಕೆ ಹಾರುವ ಹಾಂಗೆ,
ಮುಗಿಲಹತ್ತುವ ಹಾಂಗೆ,
ನಾನಾ ವ್ಯಾಪಿಯಂ ಕಂಡ ಅವರ ಸ್ವಪ್ನ ನೋಡಾ
ಅಪ್ರಮಾಣಕೂಡಲಸಂಗಮದೇವಾ.