Index   ವಚನ - 674    Search  
 
ಇನ್ನು ಮೇಲಾದವಸ್ಥೆಯ ದರ್ಶನವದೆಂತೆಂದಡೆ: ಶುದ್ಧ ತತ್ವಕೈದು ಇಂಬಾಗಿ ನಿಂದು ಅತೀತ ಮೊದಲಾಗಿ ದರ್ಶನವ ಮಾಡುವುದು. ಅದೆಂತೆಂದಡೆ: ನಾ ಇಂಬಾಗಿ ನಿಂದು ಒಂದೆಂಬುದ ಕೆಟ್ಟರವನು ಪುರುಷನನು ಮೂಲಾಧಾರದಲ್ಲಿ ದರ್ಶನವ ಮಾಡುವುದು ತೂರ್ಯಾತೀತ ನೋಡಾ ಅಪ್ರಮಾಣಕೂಡಲಸಂಗಮದೇವಾ.