Index   ವಚನ - 688    Search  
 
ಇನ್ನು ಶಿವಾವಸ್ಥೆಯ ದರ್ಶನವದೆಂತೆಂದಡೆ: ಆತ್ಮನು ತನ್ನ ತಾನರಿದು ಶಿವನನರಿವಾಗ ಶಿವಜಾಗ್ರವೆನಿಸಿತ್ತು. ಆತ್ಮನು ಶಿವನನರಿದು ಬೆರಸುವತನಕವೆ ಶಿವಸ್ವಪ್ನವೆಂದೆನಿಸಿತ್ತು. ಆತ್ಮನು ಶಿವನ ಬೆರಸಿ ನಿಂದುದೆ ಶಿವಸುಷುಪ್ತಿ. ಆತ್ಮನು ತಾನಳಿದು ತಾನುಳಿದು ನಿಂದುದೆ ಶಿವತೂರ್ಯ. ಆತ್ಮನು ತಾನಳಿದು ಶಿವನುಳಿದುನಿಂದುದೆ ಶಿವವ್ಯೋಮ. ಶಿವನೆಂಬ ನಾಮ ನಿಃಶಬ್ದವಾಗಿಹುದೆ ಶಿವವ್ಯೋಮಾತೀತವೆಂದು ಶ್ರುತಿಗಳು ಸಾರುತ್ತಿವೆ ನೋಡಾ ಅಪ್ರಮಾಣಕೂಡಲಸಂಗಮದೇವಾ.