Index   ವಚನ - 690    Search  
 
ಇನ್ನು ನಿರಂಜನಾವಸ್ಥೆಯ ದರ್ಶನವದೆಂತೆಂದಡೆ: ನಿರಂಜನವೆಂಬ ನಿತ್ಯಾನಂದಪೂರ್ಣನಿವಾಸನನರಿದು ಆ ನಿತ್ಯಾನಂದಪೂರ್ಣನಿವಾಸದೊಳು ನಿಂದುದೆ ನಿರಂಜನಜಾಗ್ರ. ನಿತ್ಯಾನಂದಪೂರ್ಣನಿವಾಸದೊಳು ವಿಕಾರ ನಿರ್ವಿಕಾರವಿಲ್ಲದಿಹುದೆ ನಿರಂಜನಸ್ವಪ್ನ. ಆ ನಿತ್ಯಾನಂದಪೂರ್ಣನಿವಾಸದೊಳು ಸಂತೋಷವಳಿದು ನಿಷ್ಪತ್ತಿಯಾಗಿ ನಿಂದುದೆ ನಿರಂಜನಸುಷುಪ್ತಿ. ನಿತ್ಯಾನಂದಪೂರ್ಣನಿವಾಸವ ಬಿಟ್ಟು ಮೇಲಾದ ಆ ನಿತ್ಯಾನಂದಾತೀತಕ್ಕೆ ಮೊದಲು ನಿರಂಜನತೂರ್ಯ. ಆ ನಿತ್ಯಾನಂದಾತೀತವ ಸುಟ್ಟ ಠಾವು ನಿರಂಜನವ್ಯೋಮ. ಆ ನಿರಂಜನವ್ಯೋಮವ ಮೆಟ್ಟಿ ಮೇಲಾದುದೆ ನಿರಂಜನವ್ಯೋಮಾತೀತವೆಂದು ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.