Index   ವಚನ - 696    Search  
 
ಇದಕ್ಕೆ ಪ್ರಳಯಕಾಲರುದ್ರೋಪನಿಷತ್: ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ಜ್ಯೋತಿಸ್ವರೂಪದಲ್ಲಿ- ಹೃದಯಮಂತ್ರೋ ಭವತಿ | ಓಂ ಪರಮಾತ್ಮಾ ದೇವತಾ | ಜ್ಯೋತಿರೂಪೋ ಲಯಂ ಪ್ರಾಪ್ತೇ ಪ್ರಥಮಂ ಪ್ರಣವಾಂಶಕೇ || ಆ ಪ್ರಣವದ ದರ್ಪಣಾಕಾರದಲ್ಲಿ- ಶಿರೋಮಂತ್ರೋ ಭವತಿ | ಓಂ ಯಕಾರಾತ್ಮಾ ದೇವತಾ | ದರ್ಪಣೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಕೇ ||'' ಆ ಪ್ರಣವದ ಅರ್ಧಚಂದ್ರಕದಲ್ಲಿ- ಶಿಖಾಮಂತ್ರೋ ಭವತಿ | ಓಂ ಅಕಾರಾತ್ಮಾ ದೇವತಾ | ಅರ್ಧಚಂದ್ರೇ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಕೇ ||'' ಆ ಪ್ರಣವದ ಕುಂಡಲಾಕಾರದಲ್ಲಿ- ಕವಚಮಂತ್ರೋ ಭವತಿ | ಓಂ ಶಿಕಾರಾತ್ಮಾ ದೇವತಾ | ಕುಂಡಲೇ ಚ ಲಯಂ ಪ್ರಾಪ್ತೇ ಚತುರ್ಥಂ ಪ್ರಣವಾಂಶಕೇ ||'' ಆ ಪ್ರಣವದ ದಂಡಸ್ವರೂಪದಲ್ಲಿ- ನೇತ್ರಮಂತ್ರೋ ಭವತಿ | ಓಂ ಮಕಾರಾತ್ಮಾ ದೇವತಾ | ದಂಡರೂಪೇ ಚ ಲಯಂ ಪ್ರಾಪ್ತೇ ಪಂಚಮಂ ಪ್ರಣವಾಂಶಕೇ ||'' ಆ ಪ್ರಣವದ ತಾರಕಸ್ವರೂಪದಲ್ಲಿ- ಅಸ್ತ್ರಮಂತ್ರೋ ಭವತಿ | ಓಂ ನಕಾರಾತ್ಮಾ ದೇವತಾ | ತಾರಕೇ ಚ ಲಯಂ ಪ್ರಾಪ್ತೇ ಷಷ್ಠಮಂ ಪ್ರಣವಾಂಶಕೇ ||'' ಇಂತೆಂದುದು ಶ್ರುತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.