Index   ವಚನ - 707    Search  
 
ಇನ್ನು ಷಡಧ್ವನ್ಯಾಸವದೆಂತೆಂದಡೆ: ಆಧಾರಚಕ್ರದ ಚತುರ್ದಳಪದ್ಮದ ಮಧ್ಯದಲ್ಲಿಹ ಮಂತ್ರ ಸದ್ಯೋಜಾತಮಂತ್ರ, ಅಲ್ಲಿಹ ಪದಂಗಳು- `ವ್ಯೋಮವ್ಯಾಪಿನೆ ವ್ಯೋಮರೂಪಾಯ ಸರ್ವವ್ಯಾಪಿನೆ ಶಿವಾಯ'ವೆಂಬ ನಾಲ್ಕು ಪದ. ಅಲ್ಲಿಹ ವರ್ಣ ವ ಶ ಷ ಸ ಎಂಬ ನಾಲ್ಕು ವರ್ಣ. ಅಲ್ಲಿಹ ಭುವನಂಗಳು- ಅನಾಶ್ರಿತ ಅನಾಥ ಅನಂತ ವ್ಯೋಮರೂಪ ವ್ಯಾಪಿನಿ ಊರ್ಧ್ವಗಾಮಿನಿ ಮೋಚಿಕಾ ರೋಚಿಕಾ ದೀಪಿಕೋದಿಕಾ ಶಾಂತ್ಯತೀತೆ ಶಾಂತಿ ವಿದ್ಯೆ ಪ್ರತಿಷ್ಠೆ ನಿವೃತ್ತಿ ಸದಾಶಿವ ಅಚಿಂತ್ಯವೆಂಬ ಹದಿನಾರು ಭುವನ. ಅಲ್ಲಿಹ ತತ್ತ್ವ ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ತ್ವ. ಅಲ್ಲಿಹ ಕಲೆ, ನಿವೃತ್ತಿ ಕಲೆ ನೋಡಾ ಅಪ್ರಮಾಣಕೂಡಲಸಂಗಮದೇವಾ.