Index   ವಚನ - 710    Search  
 
ಅಲ್ಲಿಂದ ಮೇಲೆ ಅನಾಹತಚಕ್ರದ ದ್ವಾದಶದಳಪದ್ಮ ಮಧ್ಯದಲ್ಲಿಹ ಮಂತ್ರ ತತ್ಪುರುಷಮಂತ್ರ. ಅಲ್ಲಿಹ ಪದ- ವ್ಯಾಪಿನ್ ರೂಪಿನ್ ಅರೂಪಿನ್ ಪ್ರಥಮ ಪ್ರಥಮ ತೇಜಸ್ತೇಜ ಜ್ಯೋತಿರ್ಜ್ಯೋತಿ ಅರೂಪ ಅನಿಲಿನ ಅಧೂಮ'' ವೆಂಬ ಹನ್ನೆರಡು ಪದ. ಇಲ್ಲಿಹ ವರ್ಣ-ಕ ಖ ಗ ಘ ಙ ಚ ಛ ಜ ಝ ಞ ಟ ಠ ಎಂಬ ಹನ್ನೆರಡು ವರ್ಣ. ಅಲ್ಲಿಹ ಭುವನ-ಸ್ಥಲೇಶ್ವರ, ಸ್ಥೂಲೇಶ್ವರ, ಶಂಖಕರ್ಣ, ಕಾಳಾಂಜನ, ಮಂಡಲೇಶ್ವರ, ಮಾಕೂಟ, ದ್ವಿರಂಡ, ಛಗ, ಚಂದ, ಸ್ಥಾಣು, ಸ್ವರ್ಣಾಕ್ಷ. ಭದ್ರಕರ್ಣ, ಮಹಾಲಯ, ಅವಿಮುಕ್ತ, ರುದ್ರಕೋಟಿ, ವಸ್ತ್ರಾಪದ, ಭೀಮೇಶ್ವರ, ಮಹೀಂದ್ರ, ಅಷ್ಟಹಾಸ, ವಿಮಲೇಶ್ವರ, ನಖಲ, ನಾಖಲ, ಕರುಕ್ಷೇತ್ರ, ಭೈರವ, ಕೈದಾರ, ಮಹಾಬಲ, ಮಧ್ಯಮೇಶ್ವರ, ಮಾಹೇಂದ್ರಕೇಶ್ವರ, ಜಲಭೇಶ್ವರ, ಶ್ರೀಶೈಲ, ಹರಿಶ್ಚಂದ್ರ, ಅಕುಲಿಶ, ಮುಂಡಿ, ಚಾರುಭೂತಿ, ಆಷಾಡಿ, ಪೌಷ್ಕರ, ನೈಮಿಷ, ಪ್ರಭಾಸ, ಅಮರೇಶ್ವರ, ಭದ್ರಕಾಳ, ವೀರಭದ್ರ, ತ್ರಿಲೋಚನ, ವಿಪ್ಸು, ವಭ, ವಿವಾಮಿ, ತ್ರಿದಶೇಶ್ವರ, ತ್ರಿಯಕ್ಷ, ಗಣಾ ಎಂಬ ನಾಲ್ವತ್ತೆಂಟು ಭುವನ. ಅಲ್ಲಿಹ ತತ್ತ್ವ-ಶ್ರೋತ್ರ, ತ್ವಕ್ಕು, ಚಕ್ಷು, ಜಿಹ್ವೆ, ಘ್ರಾಣವೆಂಬ ಪಂಚತತ್ತ್ವ. ಅಲ್ಲಿಹ ಕಲೆ-ಶಾಂತಿಕಲೆ ನೋಡಾ ಅಪ್ರಮಾಣಕೂಡಲಸಂಗಮದೇವಾ.