Index   ವಚನ - 711    Search  
 
ಅಲ್ಲಿಂದ ಮೇಲೆ ವಿಶುದ್ಧಿಚಕ್ರದ ಷೋಡಶದಳ ಪದ್ಮದ ಮಧ್ಯದಲ್ಲಿಹ ಮಂತ್ರ ಈಶಾನಮಂತ್ರ. ಅಲ್ಲಿಹ ಪದ- ಅಭಸ್ಮ ಅನಾದೆ ಅನಾದೆ ನಾ ನಾ ನಾ ಧೂ ಧೂ ಧೂ ಓಂ ಭೂಃ ಓಂ ಭುವಃ ಓಂ ಸ್ವಾಹಾ ಅನಿಧನಾ ನಿಧನೋದ್ಭವ ಶಿವ ಶರ್ವ'' ಎಂಬ ಹದಿನಾರು ಪದ. ಅಲ್ಲಿಹ ವರ್ಣ- ಅ ಆ ಇ ಈ ಉ ಊ ಋ ಋೂ ಲೃ ಲೄ , ಏ ಐ ಓ ಔ ಅಂ ಅಃ ಎಂಬ ಹದಿನಾರು ವರ್ಣ. ಅಲ್ಲಿಹ ಭುವನ-ದೃಕ್ಷ, ವಿಭು, ಶಂಭು, ದೌಷ್ಟ್ರಿ, ವಜ್ರ, ಫಣೀಶ, ಉದುಂಬರೀಶ, ಗ್ರಸನ, ಮಾರುತಾಶನ, ಕ್ರತುಮರ್ದನ, ಆನಂದ, ವೃಷಧರ, ಬಲಿಪ್ರಿಯ, ಭೂತಪಾಲ, ಜ್ಯೇಷ್ಠ, ಸರ್ವ, ಸುರೇಶಾನ, ವೇದಪಾರಗ, ಜ್ಞಾನಭೂತ, ಸರ್ವಜ್ಞ, ಈಶ, ಸರ್ವವಿದ್ಯಾಧಿಪ, ಪ್ರಕಾಮದ, ಪ್ರಸೀದಡನ, ಶ್ರೀಧರ, ಲಕ್ಷ್ಮೀಧರ, ಜಟಾಧರ, ಸೌಮ್ಯದೇಹ, ಧನ್ಯರೂಪ, ನಿಧೀಶ, ಮೇಘವಾಹನ, ಕಪರ್ದಿ, ಪಂಚಶಿಖಿ, ಪ್ರಪಂಚಾಂತಕ, ಕ್ಷಯಾಂತಕ, ತಿಕ್ಷು, ಸುಸೂಕ್ಷ್ಮ, ವಾಯುವೇಗ, ಲಘು, ಶೀಘ್ರ, ಸುನಾದ, ಮೇಘನಾದ, ಜ್ವಲಾಂತಕ, ದೀರ್ಘಬಾಹು, ಜಯ, ಭದ್ರ, ಶ್ವೇತಮಹಾಬಲ, ಪಾಶಹಸ್ತ, ಅತಿಬಲ, ಮಹಾಬಲ, ವಾರುಣೀಶ, ದೌಷ್ಟ್ರೀವ, ಲೋಹಿತ, ಧೂಮ್ರ, ವಿರೂಪಾಕ್ಷ, ಊರ್ಧ್ವಶೇಷ, ಉಭಯಾನಖ, ಕ್ರೂರದಷ್ಟಿ, ಹಂತ, ಮಾರಣ, ನಿರುತಿ, ಧರ್ಮ, ಧರ್ಮಪರೀಣ ನಿಯೋಕ್ತೃ ಎಂಬ ಅರವತ್ತುನಾಲ್ಕು ಭುವನ. ಅಲ್ಲಿಹ ತತ್ತ್ವ-ಗುಣತ್ರಯ ಬುದ್ಧಿ ಅಹಂಕಾರ ಚಿತ್ತ ಸಕಲವೆಂಬ ಪಂಚತತ್ತ್ವ. ಅಲ್ಲಿಹ ಕಲೆ-ಶಾಂತ್ಯತೀತ ಕಲೆ ನೋಡಾ ಅಪ್ರಮಾಣ ಕೂಡಲಸಂಗಮದೇವಾ.