ಇನ್ನು ಪಂಚಾಕ್ಷರಂಗಳ ನಿವೃತ್ತಿಯೆಂತೆಂದಡೆ:
ಆ ಪ್ರಣವದ ತಾರಕಾಕೃತಿಯಲ್ಲಿಹ ನಕಾರದಲ್ಲಿ ನಕಾರವಡಗಿತ್ತು
ಆ ಪ್ರಣವದ ದಂಡಸ್ವರೂಪದಲ್ಲಿಹ ಮಕಾರದಲ್ಲಿ ಮಕಾರವಡಗಿತ್ತು
ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿ ಶಿಕಾರವಡಗಿತ್ತು
ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿಹ
ಯಕಾರದಲ್ಲಿ ಯಕಾರವಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ನಕಾರಶ್ಚ ಮಕಾರಶ್ಚ ಶಿಕಾರಶ್ಚ ವಕಾರಕಂ
ತಥಾ ಯಕಾರಂ ಚೈವ ಮೂಲ ಬೀಜಾಕ್ಷರೇ ಲಯಃ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu pan̄cākṣaraṅgaḷa nivr̥ttiyentendaḍe:
Ā praṇavada tārakākr̥tiyalliha nakāradalli nakāravaḍagittu
ā praṇavada daṇḍasvarūpadalliha makāradalli makāravaḍagittu
ā praṇavada kuṇḍalākāradalliha śikāradalli śikāravaḍagittu
ā praṇavada ardhacandrakadalliha vakāradalli vakāravaḍagittu.
Ā praṇavada darpaṇākāradalliha
yakāradalli yakāravaḍagittu nōḍā.
Idakke mahāvātulāgamē:
Nakāraśca makāraśca śikāraśca vakārakaṁ
tathā yakāraṁ caiva mūla bījākṣarē layaḥ ||''
intendudāgi,
apramāṇakūḍalasaṅgamadēvā.