Index   ವಚನ - 719    Search  
 
ಕ ಖ ಗ ಘ ಙ ಚ ಛ ಜ ಝ ಞ ಟ ಠ ಎಂಬ ದ್ವಾದಶಾಕ್ಷರವು ಅನಾಹತಚಕ್ರದ ವಕಾರಬೀಜದಲ್ಲಿ ಅಡಗಿತ್ತು. ಅ ಆ ಇ ಈ ಉ ಊ ಋ ಋೂ ಲೃ ಲೄ ಏ ಐ ಓ ಔ ಅಂ ಆಃ ರಂಬ ಘೋಡಶ ವರ್ಣಾಕ್ಷರವು ವಿಶುದ್ಧಿಚಕ್ರದ ಯಕಾರಬೀಜದಲ್ಲಿ ಅಡಗಿತ್ತು. ಹಂ ಳಂ ಹಂ ಕ್ಷಂ ಎಂಬ ಚತುರ್ವರ್ಣಾಕ್ಷರವು ಆಜ್ಞಾಚಕ್ರದ ಓಂಕಾರಬೀಜದ ಜ್ಯೋತಿಸ್ವರೂಪದಲ್ಲಿಹ ಚಿದಾತ್ಮ ಪರಮಾತ್ಮದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಉತ್ತರವಾತುಲಾಗಮೇ: ಕ ಖ ದ್ವಯಂ ಗ ಗೋಪ್ನಶ್ಚ ಛ ದ್ವೇ ಜ ಝ ಞ ಸ್ತಥಾ | ಟ ಠ ದ್ವಿವರ್ಣಕಂ ಚೈವ ವಕಾರೇ ಚ ವಿಲೀಯತೇ || ಅ ಆ ಇ ಈ ಉ ಊ ವರ್ಣಂ ಚ ಋ ಋೂ ಲೃ ಲೄ ಸ್ತಥಾ | ಏ ಐ ಓ ಔ ತಥಾಃ ಅಂ ಆಃ ಯಕಾರೇ ಚ ಲಯಂ ಗತಾಃ || ಹಂ ಕ್ಷಂ ದ್ವಿವರ್ಣಕಂ ಚೈವ ಪರಮಾತ್ಮೇ ವಿಲೀಯತೇ | ಹಂ ಳಂ ದ್ವಿವರ್ಣಕಂ ಚೈವ ಚಿದಾತ್ಮೇ ಚ ಲಯಂ ಗತಾಃ || ಇತಿ ವರ್ಣಲಯಂ ಜ್ಞಾತುಂ ದುರ್ಲಭಂ ಕಮಲಾನನೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.