Index   ವಚನ - 721    Search  
 
ಅನಾಶ್ರಿತವೆಂಬ ಭುವನ ಮೊದಲಾಗಿ ಕಾಲಾಗ್ನಿರುದ್ರನೆಂಬ ಭುವನ ಕಡೆಯಾಗಿ ಇನ್ನೂರಿಪ್ಪತ್ನಾಲ್ಕು ಭುವನಂಗಳು ಆ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಚತುರ್ವಿಂಶತಿ ಭುವನಂ ಚ ದ್ವಿಶತಂ ಭುವನಂ ತಥಾ | ಇತಿ ಭುವನಾಧ್ವಂ ಚ ದೇವೀ ಓಂಕಾರೇ ಚ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.