Index   ವಚನ - 723    Search  
 
ಗುಣತ್ರಯ ಮನ ಬುದ್ಧಿ ಚಿತ್ತ ಅಹಂಕಾರ ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣ, ವಾಕು ಪಾಣಿ ಪಾದ ಪಾಯು ಗುಹ್ಯ, ಶಬ್ದ ಸ್ಪರ್ಶ ರೂಪ ರಸ ಗಂಧ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಈ ಇಪ್ಪತ್ತು ನಾಲ್ಕು ತತ್ವಂಗಳು ಸಕಲತತ್ವದಲ್ಲಿ ಅಡಗಿತ್ತು. ಸಕಲ ನಿಃಕಲತತ್ವಂಗಳು ಏಕಾರ್ಥವಾಗಿ ಪರಶಿವತತ್ವವಾಗಿತ್ತು ನೋಡಾ. ಇದಕ್ಕೆ ಈಶ್ವರೋsವಾಚ: ರಾಗವಿದ್ಯಾಕಲಾಶ್ಚೈವ ನೇತಿಶ್ಚಕಾಲ ಮಾಯಯಾ | ಈಶ್ವರಃ ಶುದ್ಧವಿದ್ಯಾಶ್ಚ ಪರಾಶಕ್ತಿಃ ಸದಾಶಿವಃ || ಇತಿ ದಶ ತತ್ವಂ ಚೈವ ನಿಃಕಲತತ್ವ ವಿಲೀಯತೇ | ಗುಣತ್ರಯಂ ಮನೋ ಬುದ್ಧಿಃ ಚಿತ್ತಮಹಂಕಾರಸ್ತಥಾ || ಶ್ರೋತ್ರತ್ವಗ್ನೇತ್ರಜಿಹ್ವಾ ಚ ಘ್ರಾಣಂ ಪಂಚೇಂದ್ರಿಯಂ ತಥಾ | ವಾಕ್ ಪಾಣಿಶ್ಚ ಪಾದಶ್ಚ ಪಾಯುಗುಹ್ಯಸ್ತಥೈವ ಚ || ಪೃಥಿವ್ಯಪ್ಸ್ತತಸ್ತೇಜಃ ವಾಯುವ್ಯೋಮ ತಥೈವ ಚ | ಇತಿ ದಶೇಂದ್ರಿಯಾಣಾಂ ಸಕಲ ತತ್ವವಿಲೀಯತೇ | ಸಕಲನಿಃಕಲೋರೈಕ್ಯಂ ಪರತತ್ವಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.