ಪರಬ್ರಹ್ಮಸ್ವರೂಪವಾಗಿಹ ಪರಮಪ್ರಣವದ ತಾರಕಸ್ವರೂಪದಲ್ಲಿ
ಪೃಥ್ವಿಯೆಂಬ ಮಹಾಭೂತವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಅಪ್ಪುವೆಂಬ ಮಹಾಭೂತವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ತೇಜವೆಂಬ ಮಹಾಭೂತವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ವಾಯುವೆಂಬ ಮಹಾಭೂತವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಆಕಾಶವೆಂಬ ಮಹಾಭೂತವಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ
ಆತ್ಮನೆಂಬ ಮಹಾಭೂತವಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಪೃಥ್ವೀರಾಪಃ ಸ್ತಥಾ ತೇಜಃ ವಾಯುಶ್ಚಾಕಾಶ ಚೇತನಃ |
ಇತಿ ಷಷ್ಠಭೂತಾನಿ ದೇವೀ ಓಂಕಾರ ಗರ್ಭೆ ವಿಲೀಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Parabrahmasvarūpavāgiha paramapraṇavada tārakasvarūpadalli
pr̥thviyemba mahābhūtavaḍagittu.
Ā praṇavada daṇḍakasvarūpadalli appuvemba mahābhūtavaḍagittu.
Ā praṇavada kuṇḍalākāradalli tējavemba mahābhūtavaḍagittu.
Ā praṇavada ardhacandrakadalli vāyuvemba mahābhūtavaḍagittu.
Ā praṇavada darpaṇākāradalli ākāśavemba mahābhūtavaḍagittu.
Ā praṇavada jyōtisvarūpadalli
ātmanemba mahābhūtavaḍagittu nōḍā.
Idakke mahāvātulāgamē:
Pr̥thvīrāpaḥ stathā tējaḥ vāyuścākāśa cētanaḥ |
iti ṣaṣṭhabhūtāni dēvī ōṅkāra garbhe vilīyatē ||''
intendudāgi,
apramāṇakūḍalasaṅgamadēvā.