Index   ವಚನ - 750    Search  
 
ಇನ್ನು ಷಡ್ವಿಧಭೂತಂಗಳ ನಿವೃತ್ತಿ ಅದೆಂತೆಂದಡೆ: ಸದ್ಯೋಜಾತಮುಖದಲ್ಲಿ ಪೃಥ್ವಿ ಎಂಬ ಮಹಾಭೂತವಡಗಿತ್ತು. ವಾಮದೇವಮುಖದಲ್ಲಿ ಅಪ್ಪುವೆಂಬ ಮಹಾಭೂತವಡಗಿತ್ತು. ಅಘೋರಮುಖದಲ್ಲಿ ತೇಜವೆಂಬ ಮಹಾಭೂತವಡಗಿತ್ತು. ತತ್ಪುರುಷಮುಖದಲ್ಲಿ ವಾಯುವೆಂಬ ಮಹಾಭೂತವಡಗಿತ್ತು. ಈಶಾನಮುಖದಲ್ಲಿ ಆಕಾಶವೆಂಬ ಮಹಾಭೂತವಡಗಿತ್ತು. ಪ್ರಣವದ ಅರ್ಧಚಂದ್ರಕದಲ್ಲಿ ಮನವೆಂಬ ಮಹಾಭೂತವಡಗಿತ್ತು ನೋಡಾ. ಇದಕ್ಕೆ ಉತ್ತರವಾತುಲಾಗಮೇ: ಪೃಥ್ವೀರಾಪೆಸ್ತಥಾ ತೇಜಃ ಮನೋ ವಾಯುಶ್ಚವ್ಯೋಮಕಂ | ಇತಿ ಷಷ್ಠಭೂತಂ ಚೈವ ಷಷ್ಠವಕ್ತ್ರೇ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.