ಇನ್ನು ಷಡ್ವಿಧಲಿಂಗದ ನಿವೃತ್ತಿ ಅದೆಂತೆಂದಡೆ:
ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ತಾರಕಸ್ವರೂಪದಲ್ಲಿ ಆಚಾರಲಿಂಗವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಗುರುಲಿಂಗವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಶಿವಲಿಂಗವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಜಂಗಮಲಿಂಗವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಪ್ರಸಾದಲಿಂಗವಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಮಹಾಲಿಂಗವಡಗಿತ್ತು ನೋಡಾ.
ಇದಕ್ಕೆ ಶಿವಲಿಂಗಾಗಮೇ:
ಓಂಕಾರ ತಾರಕಾರೂಪೇ ಆಚಾರಲಿಂಗೇ ಚ ಲೀಯತೇ |
ಓಂಕಾರ ದಂಡರೂಪೇ ಚ ಗುರುಲಿಂಗಂ ಚ ಲೀಯತೇ ||
ಓಂಕಾರ ಕುಂಡಲಾಕಾರೇ ಶಿವಲಿಂಗಂ ಚ ಲೀಯತೇ |
ಓಂಕಾರ ಅರ್ಧಚಂದ್ರೇ ಚ ಚರಲಿಂಗಶ್ಚಲೀಯತೇ ||
ಓಂಕಾರ ದರ್ಪಣಾಕಾರೇ ಪ್ರಸಾದಲಿಂಗ ಲೀಯತೇ |
ಓಂಕಾರ ಜ್ಯೋತಿರೂಪೇ ಚ ಮಹಾಲಿಂಗಶ್ಚ ಲೀಯತೇ |
ಇತಿ ಷಡ್ಲಿಂಗೈಕ್ಯಂ ಜ್ಞಾತುಂ ದುರ್ಲಭಂ ಚ ಮಾನನೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.