ಇನ್ನು ಷಡ್ವಿಧಕಲೆಗಳ ನಿವೃತ್ತಿ ಅದೆಂತೆಂದಡೆ:
ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ತಾರಕಸ್ವರೂಪದಲ್ಲಿ ನಿವೃತ್ತಿಕಲೆಯಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಪ್ರತಿಷ್ಠಾಕಲೆ ಅಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ವಿದ್ಯಾಕಲೆಯಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಶಾಂತಿಕಲೆಯಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಾಂತ್ಯತೀತಕಲೆಯಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಶಾಂತ್ಯತೀತೋತ್ತರ ಕಲೆಯಡಗಿತ್ತು.
ಇದಕ್ಕೆ ಅಖಂಡಾಗಮೇ:
ಓಂಕಾರ ತಾರಕಾರೂಪೇ ನಿವೃತ್ತಿಶ್ಚ ವಿಲೀಯತೇ |
ಓಂಕಾರ ದಂಡರೂಪೇ ಚ ಪ್ರತಿಷ್ಠಾ ಲೀಯತೇ ತಥಾ ||
ಓಂಕಾರ ಕುಂಡಲಾಕಾರೇ ಕಲಾವಿದ್ಯಾ ವಿಲೀಯತೇ |
ಓಂಕಾರ ಅರ್ಧಚಂದ್ರೇ ಚ ಕಲಾ ಶಾಂತಿರ್ವಿಲೀಯತೇ |
ಓಂಕಾರ ದರ್ಪಣಾಕಾರೇ ಶಾಂತ್ಯತೀತಂ ಚ ಲೀಯತೇ |
ಓಂಕಾರ ಜ್ಯೋತಿಸ್ವರೂಪೇ ಚ ಶಾಂತ್ಯತೀತೋತ್ತರಂ ಲಯಃ ||''
ಇಂತೆಂದುದಾಗಿ,
ಇದಕ್ಕೆ ಈಶ್ವರೋsವಾಚ:
ನಿವೃತ್ತಿಃ ಪ್ರತಿಷ್ಠಾ ಚೈವ ವಿದ್ಯಾ ಶಾಂತಿಕಲಾಸ್ತಥಾ |
ಶಾಂತ್ಯತೀತ ಕಲಾ ಚೈವ ಶಾಂತ್ಯತೀತೋತ್ತರಂ ತಥಾ |
ಇತಿ ಷಷ್ಠಕಲಾ ದೇವಿ ಓಂಕಾರೇ ಚ ವಿಲೀಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaḍvidhakalegaḷa nivr̥tti adentendaḍe:
Akhaṇḍajyōtirmayavāgiha gōḷakākārapraṇavada
tārakasvarūpadalli nivr̥ttikaleyaḍagittu.
Ā praṇavada daṇḍakasvarūpadalli pratiṣṭhākale aḍagittu.
Ā praṇavada kuṇḍalākāradalli vidyākaleyaḍagittu.
Ā praṇavada ardhacandrakadalli śāntikaleyaḍagittu.
Ā praṇavada darpaṇākāradalli śāntyatītakaleyaḍagittu.
Ā praṇavada jyōtisvarūpadalli śāntyatītōttara kaleyaḍagittu.
Idakke akhaṇḍāgamē:
Ōṅkāra tārakārūpē nivr̥ttiśca vilīyatē |
ōṅkāra daṇḍarūpē ca pratiṣṭhā līyatē tathā ||
ōṅkāra kuṇḍalākārē kalāvidyā vilīyatē |
ōṅkāra ardhacandrē ca kalā śāntirvilīyatē |
ōṅkāra darpaṇākārē śāntyatītaṁ ca līyatē |
ōṅkāra jyōtisvarūpē ca śāntyatītōttaraṁ layaḥ ||''
intendudāgi,
idakke īśvarōsvāca:
Nivr̥ttiḥ pratiṣṭhā caiva vidyā śāntikalāstathā |
śāntyatīta kalā caiva śāntyatītōttaraṁ tathā |
iti ṣaṣṭhakalā dēvi ōṅkārē ca vilīyatē ||''
intendudāgi,
apramāṇakūḍalasaṅgamadēvā.