Index   ವಚನ - 755    Search  
 
ಇನ್ನು ಷಡ್ವಿಧಹಸ್ತಂಗಳ ನಿವೃತ್ತಿ ಅದೆಂತೆಂದಡೆ: ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪದಲ್ಲಿ ಸುಚಿತ್ತಹಸ್ತವಡಗಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತವಡಗಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರಹಸ್ತವಡಗಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಸುಮನಹಸ್ತವಡಗಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಸುಜ್ಞಾನಹಸ್ತವಡಗಿತ್ತು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಭಾವಹಸ್ತವಡಗಿತ್ತು ನೋಡಾ. ಇದಕ್ಕೆ ಚಿತ್ಪ್ರಕಾಶಾಗಮೇ: ಓಂಕಾರ ತಾರಕಾರೂಪೇ ಚಿತ್ತಹಸ್ತಂ ಚ ಲೀಯತೇ | ಓಂಕಾರ ದಂಡರೂಪೇ ಚ ಬುದ್ಧಿಹಸ್ತಂ ಚ ಲೀಯತೇ | ಓಂಕಾರ ಕುಂಡಲಾಕಾರೇ ನಿರಹಂಕಾರಶ್ಚ ಲೀಯತೇ | ಓಂಕಾರ ಅರ್ಧಚಂದ್ರೇ ಚ ಮನೋಹಸ್ತಂ ಚ ಲೀಯತೇ || ಓಂಕಾರ ದರ್ಪಣಾಕಾರೇ ಜ್ಞಾನಹಸ್ತಂ ಚ ಲೀಯತೇ | ಓಂಕಾರ ಜ್ಯೋತಿರೂಪೇ ಚ ಭಾವಹಸ್ತಶ್ಚ ಲೀಯತೇ | ಇತಿ ಹಸ್ತಲಯಂ ಜ್ಞಾತುಂ ಸುಸೂಕ್ಷ್ಮಂ ಶ್ರುಣು ಪಾರ್ವತಿ || ಇದಕ್ಕೆ ಈಶ್ವರೋsವಾಚ: ಚಿತ್ತಂ ಬುದ್ಧಿರಹಂಕಾರಂ ಮನೋಜ್ಞಾನಂ ಚ ಲೀಯತೇ | ಇತಿ ಷಷ್ಠಕರಂ ದೇವಿ ಸ್ಥಾನಸ್ಥಾನೇ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.