Index   ವಚನ - 763    Search  
 
ಇನ್ನು ಭಕ್ತನ ತಾಮಸನಿರಸನವದೆಂತೆಂದಡೆ: ಭಕಾರವೇ ಮಹಾಜ್ಞಾನ, ತಕಾರವೇ ತತ್ವಜ್ಞಾನ ನೋಡಾ. ಭಕಾರ ತಾರಕಾಸ್ವರೂಪ ಸ್ವಭಾವಗಳನರಿದಾತನೆ ಭಕ್ತನು. ಭಕಾರ ತಾರಕಾಸ್ವರೂಪ ಸ್ವಭಾವಂಗಳನರಿಯದೆ ಭಕ್ತರೆಂಬ ವೇಷಡಂಭಕ ರೌರವನರಕಿಗಳನೇನೆಂಬೆನಯ್ಯಾ. ಇದಕ್ಕೆ ವೀರಾಗಮೇ: ಭಕಾರಂತು ಮಹಾಜ್ಞಾನಂ ತಕಾರಂ ತತ್ವರೂಪಕಂ | ತತ್ವಜ್ಞಾನದಯಂ ಚೈವ ಭಕ್ತಶ್ರದ್ಧಾಭಿಧೀಯತೇ || ಭಕಾರಂ ಭವದೂರಂ ಚ ತಕಾರಂ ತನುನಾಶನಂ | ಭಕ್ತಾಕ್ಷರ ದ್ವಯಂ ನಾಸ್ತಿ ತದ್ಭಕ್ತೋ ನರಕಂ ವ್ರಜೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.