Index   ವಚನ - 765    Search  
 
ಭಕ್ತನೆಂಬೆರಡಕ್ಷರವೇ ತಾನೆಂದು ತಿಳಿದು ಮೋಕ್ಷವನೈದಲರಿಯದೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವ ಹಿಡಿದು ಕೆಟ್ಟರು ನೋಡಾ; ಭಕ್ತರೆಲ್ಲ ಸತ್ತರು ನೋಡಾ. ನಾಯ ಸಾವ ಸತ್ತು ಹುಟ್ಟುವಂಗೆ ಎತ್ತಣ ಮುಕ್ತಿ ಹೇಳಾ. ಇದಕ್ಕೆ ಉತ್ತರವೀರಾಗಮೇ: ಭಕಾರಶ್ಚ ಮಹಾಜ್ಞಾನಂ ತಕಾರಂ ತತ್ವರೂಪಕಂ | ತತ್ವಜ್ಞಾನಂ ಚ ಜಾನಾತಿ ತದ್ಭಕ್ತೋ ನರಕಂ ವ್ರಜೇತ್ || ಅಂಗಭೋಗಂ ಚ ಕ್ಷೇತ್ರಂಚ ಕಾಂಚನಂ ಕಾಮಿನೀ ತಥಾ | ಚತುರ್ಥಾಪೇಕ್ಷಭಕ್ತಾನಾಂ ಕಥಂ ಮುಕ್ತಿಃ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.