ಹೊನ್ನು ಬಿಡದೆ ಹಿರಿಯರೆಂಬರು;
ಅಲ್ಲಲ್ಲ ನೋಡಾ.
ಹೆಣ್ಣು ಬಿಡದೆ ಹಿರಿಯರೆಂಬರು;
ಅಲ್ಲಲ್ಲ ನೋಡಾ.
ಮಣ್ಣು ಬಿಡದೆ ಹಿರಿಯರೆಂಬರು;
ಅಲ್ಲಲ್ಲ ನೋಡಾ.
ಈ ತ್ರಿವಿಧವನತಿಗಳೆಯದೆ
ಹಿರಿಯರೆಂಬ ನುಡಿಗೆ ನಾಚರು ನೋಡಾ.
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Honnu biḍade hiriyarembaru;
allalla nōḍā.
Heṇṇu biḍade hiriyarembaru;
allalla nōḍā.
Maṇṇu biḍade hiriyarembaru;
allalla nōḍā.
Ī trividhavanatigaḷeyade
hiriyaremba nuḍige nācaru nōḍā.
Apramāṇakūḍalasaṅgamadēvā.