ಉಕಾರದೊಳಗೆ ಉಕಾರವನರಿಯರು
ಉಕಾರದೊಳಗೆ ಅಕಾರವನರಿಯರು
ಉಕಾರದೊಳಗೆ ಮಕಾರವನರಿಯರು
ಉಕಾರದೊಳಗೆ ಓಂಕಾರವನರಿಯರು
ಉಕಾರದೊಳಗೆ ನಿರಾಳನಿರಂಜನ ನಿರಾಮಯ
ನಿರಾಮಯಾತೀತವನರಿಯದೆ ಗುರುಲಿಂಗಜಂಗಮವೆಂದು ಸುಳಿದನಾದರೆ
ಅವನನಾಚಾರಿ ಪಂಚಮಹಾಪಾತಕ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ukāradoḷage ukāravanariyaru
ukāradoḷage akāravanariyaru
ukāradoḷage makāravanariyaru
ukāradoḷage ōṅkāravanariyaru
ukāradoḷage nirāḷaniran̄jana nirāmaya
nirāmayātītavanariyade guruliṅgajaṅgamavendu suḷidanādare
avananācāri pan̄camahāpātaka nōḍā
apramāṇakūḍalasaṅgamadēvā.