Index   ವಚನ - 778    Search  
 
ಅಕಾರ ಉಕಾರ ಮಕಾರವನರಿಯದೆ, ಅಕಾರದೊಳಗೆ ಅಕಾರವನರಿಯರು, ಅಕಾರದೊಳಗೆ ಉಕಾರವನರಿಯರು, ಅಕಾರದೊಳಗೆ ಮಕಾರವನರಿಯರು, ಅಕಾರದೊಳಗೆ ಒಂಕಾರವನರಿಯರು. ಅಕಾರದೊಳಗೆ ನಿರಾಳ ನಿರಂಜನ ನಿರಾಮಯ ನಿರಾಮಯಾತೀತವನರಿಯದೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಪದಾರ್ಥದಲ್ಲಿ ಬದ್ದರಾಗಿ, ಗುರುಲಿಂಗಜಂಗಮವೆಂದು ಸುಳಿದಡೆ ರೌರವನರಕವೆಂದುದು ನೋಡಾ. ಇದಕ್ಕೆ ವೀರಾಗಮೇ: ಜಂಗಮಶ್ಚ ಗುರೂಣಾಂಚ ಕಾಮಿನೀ ವಿತ್ತಬದ್ಧಯೋಃ | ದ್ವಿವಿಧಂ ನರಕಂ ಯಾಂತಿ ಯಾವಚ್ಚಂದ್ರದಿವಾಕರಂ ||'' ಎಂದುದಾಗಿ, ಇದನರಿದು ತ್ರಿವಿಧವನತಿಗಳದು ಮನ ಮಹಾಘನದಲ್ಲಿ ಲೀಯವಾಗಿ ಸುಳಿವ ಮಹಾಸುಳಿವಿಂಗೆ ನಮೋ ನಮೋ ಎಂಬೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.