Index   ವಚನ - 782    Search  
 
ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳಲ್ಲಿ ಬಿದ್ದು ಹೊರಳಾಡುತ್ತಿಹರು, ಗುರುವೆಂಬ ನುಡಿಗೆ ನಾಚರು. ಪರಧನ ಪರಸ್ತ್ರೀಗಳುಪ್ಪುತ್ತಿಹರು, ಗುರುವೆಂಬ ನುಡಿಗೆ ನಾಚರು. ಜಾಗ್ರ ಸ್ವಪ್ನ ಸುಷುಪ್ತಿಯ ಕೆಡಿಸಿ ತೂರ್ಯ ತೂರ್ಯಾತೀತವ ಬೆರಸಲರಿಯರು, ಗುರುವೆಂಬ ನುಡಿಗೆ ನಾಚರು. ಆ ತೂರ್ಯಾತೀತಕತ್ತತ್ತ ವ್ಯೋಮಾತೀತವಾಗಿಹ ಮಹಾಘನದಲ್ಲಿ ಬೆರಸಿ ಬೇರಾಗಲರಿಯದೆ ಗುರುಲಿಂಗಜಂಗಮವೆಂದು ಸುಳಿವ ಪಂಚಮಹಾಪಾತಕರ ನೋಡಿ ನಾಚಿತ್ತು ನಾಚಿತ್ತು ನೋಡಾ ಎನ್ನ ಮನ ಅಪ್ರಮಾಣಕೂಡಲಸಂಗಮದೇವಾ.