Index   ವಚನ - 795    Search  
 
ತನ್ನನರಿಯದೆ ತಾನೆ ಕೆಟ್ಟೆನೆಂದವು ಶ್ರುತಿಗಳು. ತನ್ನನರಿದಡೆ ತನಗೆ ಕೇಡಿಲ್ಲವೆಂದುದು ನೋಡಾ ಶ್ರುತಿಗಳು. ತನ್ನನರಿವ ಅರಿವನರಿಯದೆ ತನ್ನ ನಚ್ಚಿಸುತ್ತ ತಾನಿದ್ದನು ನೋಡಾ ಅಪ್ರಮಾಣಕೂಡಲಸಂಗಮದೇವಾ.