Index   ವಚನ - 797    Search  
 
ಕಾಯ ಜೀವದ ಹೊಲಿಗೆ ಬಿಚ್ಚಲರಿಯದಿದ್ದೆನು ಅನೇಕ ಕಾಲವು. ಕಾಯ ಜೀವದ ಹೊಲಿಗೆಯ ಬಿಚ್ಚಿ ತೋರಿದನೆನ್ನ ಸದ್ಗುರುಸ್ವಾಮಿ. ಜೀವಪರಮರ ಭೇದವನರಿಯದೆ ಅನೇಕ ಭವದಲ್ಲಿ ಬಂದೆನು. ಅನೇಕ ಭವದಲ್ಲಿ ಬಂದ ಶಿಶುವನೆತ್ತಿಕೊಂಡು ಜೀವ ಪರಮರ ಭೇದವ ತಿಳಿಹಿಸಿ ಬೆರೆಸುವ ಪರಿಯ ತೋರಿದ ಮಹಾಗುರುವಿಂಗೆ ನಮೋ ನಮೋ ಎನುತಿರ್ದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.