Index   ವಚನ - 800    Search  
 
ಜೀವ ಕರಣ ದೇಹ ಇತ್ಯಾದಿಗಳು ವಿಸ್ತೀರ್ಣವಾಗಿ ಅಡಗುವದಕ್ಕೆ ಇಂಬಾಗಿ ವಿಷಯಭಾವವು ಕೆಟ್ಟ ಭಾವುಕರ ಕಾರ್ಯ ಉಪಾಧಿ ಅರಿದು, ಸುಷುಪ್ತಿಯ ಹಾಂಗೆ ಪರಮವಿಕೃತಿಭಾವಂಗಳು ವಿಸ್ತೀರ್ಣವಾಗಿ ಅಡಗಿ, ಏನೂ ಇಲ್ಲದ ಅವಾಚ್ಯಪರಮಭಾವವಾಗಿಹ ತೂರ್ಯಾತೀತವ ಶ್ರುತಿಗಳು ಪರವೊಡಲೆಂದುದು ನೋಡಾ ಅಪ್ರಮಾಣಕೂಡಲಸಂಗಮದೇವಾ.