Index   ವಚನ - 809    Search  
 
ಅಕಾರವೆಂಬೆನೆ ಉಕಾರವಾಗಿಹುದು, ಉಕಾರವೆಂಬೆನೆ ಮಕಾರವಾಗಿಹುದು ನೋಡಾ. ಮಕಾರವೆಂಬೆನೆ ಓಂಕಾರವಾಗಿಹುದು, ಓಂಕಾರವೆಂಬೆನೆ ಅಚಲವಪ್ಪ ನಿರಾಳವಾಗಿಹುದು ನೋಡಾ. ನಿರಾಳವೆಂಬೆನೆ ನಿರಂಜನವಾಗಿಹುದು, ನಿರಂಜನವೆಂಬೆನೆ ನಿರಾಮಯವಾಗಿಹುದು ನೋಡಾ. ನಿರಾಮಯವೆಂಬೆನೆ ನಿರಾಮಯಾತೀತವಾಗಿಹುದು, ನಿರಾಮಯಾತೀತವೆಂಬೆನೆ ನಿರಾಮಯಾತೀತಕತ್ತತ್ತವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.