ಕುಂಡಲೀಶಕ್ತಿಯ ಬಾಯಲ್ಲಿ ಮೂರು ಮಾತ್ರೆ ಹುಟ್ಟಿತ್ತು ನೋಡಾ.
ಒಂದು ಮಾತ್ರೆ ಆರು ಮಾತ್ರೆಯಾಯಿತ್ತು.
ಒಂದು ಮಾತ್ರೆ ನಾಲ್ಕು ಮಾತ್ರೆಯಾಯಿತ್ತು.
ಒಂದು ಮಾತ್ರೆ ಆರು ಮಾತ್ರೆಯಾಯಿತ್ತು.
ಈ ಹನ್ನೆರಡು ನಾಲ್ಕು ಹದಿನಾರು ಮಾತ್ರೆಗಳಾದವು.
ಈ ಹದಿನಾರು ಹದಿನಾರು ಮೂವತ್ತೆರಡು ಮಾತ್ರೆಗಳಾದವು.
ಈ ಮೂವತ್ತೆರಡು ಮೂವತ್ತೆರಡು
ಅರುವತ್ತುನಾಲ್ಕು ಮಾತ್ರೆಗಳಾದವು.
ಈ ಭೇದವ ಬಲ್ಲಾತನೆ ಶಿವಯೋಗಿ
ಲಿಂಗಾನುಭಾವಿ ಎಂಬೆ ನೋಡಾ
ಅಪ್ರಮಾಣಕೂಡಲಸಂಗಮದೇವಾ.