Index   ವಚನ - 830    Search  
 
ದೇಹ ಪ್ರಾಣ ಇಂದ್ರಿಯ ಕರಣಂಗಳ ಕೂಡಿ ವರ್ತಿಸುತ್ತಿಹುದು ನೋಡಾ ಜೀವಾತ್ಮನು. ದೇಹ ಪ್ರಾಣ ಇಂದ್ರಿಯಂಗಳನತಿಗಳೆದು ಕರಣಂಗಳ ಕೂಡಿ ವರ್ತಿಸುತ್ತಿಹುದು ನೋಡಾ ಅಂತರಾತ್ಮನು. ದೇಹ ಪ್ರಾಣ ಇಂದ್ರಿಯ ಕರಣಂಗಳನತಿಗಳೆದು ಒಬ್ಬನೆ ನಿಶ್ಚಿಂತನಾಗಿಹನು ನೋಡಾ ಪರಮಾತ್ಮನು ಅಪ್ರಮಾಣಕೂಡಲಸಂಗಮದೇವಾ.