ನಾದವೆಂಬ ಕೆರೆಯೊಳಗೆ ಬಿಂದುವೆಂಬ ಅಮೃತವ ತುಂಬಿ,
ಪಂಚೇಂದ್ರಿಯವೆಂಬ ಗದ್ದಿಗೆ ಕರಣಂಗಳೆಂಬ ಕಾಲುವೆಯ ತಿದ್ದಿ,
ಜಾತಿ ವಿಜಾತಿಯೆಂಬ ಕೆಸರನುತ್ತು,
ಪುಣ್ಯಪಾಪವೆಂಬ ಕಳೆಯ ಕಿತ್ತು.
ಓಂ ನಮಃಶಿವಾಯವೆಂಬ ಬೀಜವ ಬಿತ್ತಿ,
ಸ್ವಯಂಪ್ರಕಾಶವೆಂಬ ಅಗ್ಘವಣಿಯ ಕಟ್ಟಿ,
ಪರಮಾನಂದವೆಂಬ ಬೆಳೆಯಾದವು.
ಆಣವ ಮಾಯಾ ಕಾರ್ಮಿಕವೆಂಬ ಹಂದಿಯ
ಹೊದ್ದಲೀಸದೆ ಹೆಡನೊತ್ತಿದೆನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nādavemba kereyoḷage binduvemba amr̥tava tumbi,
pan̄cēndriyavemba gaddige karaṇaṅgaḷemba kāluveya tiddi,
jāti vijātiyemba kesaranuttu,
puṇyapāpavemba kaḷeya kittu.
Ōṁ namaḥśivāyavemba bījava bitti,
svayamprakāśavemba agghavaṇiya kaṭṭi,
paramānandavemba beḷeyādavu.
Āṇava māyā kārmikavemba handiya
hoddalīsade heḍanottidenu nōḍā
apramāṇakūḍalasaṅgamadēvā.