Index   ವಚನ - 833    Search  
 
ಆಣವ ಮಾಯಾ ಕಾರ್ಮಿಕವೆಂಬ ಮೂರು ಕಲ್ಲನಿರಿಸಿ, ಜ್ಞಾನೇಂದ್ರಿಯ ಕರ್ಮೇಂದ್ರಿಯವೆಂಬ ಹೊಟ್ಟ ನೀಡಿ, ಅಷ್ಟಮದವೆಂಬ ಕಟ್ಟಿಗೆಯ ತಂದು ಜ್ಞಾನಾಗ್ನಿಯೆಂಬ ಕಿಚ್ಚನೊಟ್ಟಿ ತನುವೆಂಬ ಭಾಜನವ ತೊಳೆದು ಸ್ವಯಂಪ್ರಕಾಶವೆಂಬ ಉದಕವ ತುಂಬಿ, ಮನವೆಂಬ ಸಯಿದಾನವ ನೀಡಿ, ಜ್ಞಾನಾಗ್ನಿಯಲ್ಲಿ ಪಾಕವಾದ ಪ್ರಸಾದವನು ಮಹಾಲಿಂಗಕ್ಕೆ ಅರ್ಪಿಸುವ ಮಹಾಮಹಿಮರ ತೋರಾ ಅಪ್ರಮಾಣಕೂಡಲಸಂಗಮದೇವಾ.