ಪದ್ಮವೊಂದು ಮೊಗ್ಗೆ ಮೂರುಂಟು ನೋಡಾ:
ಮೂರು ವಿಕಸಿತವಾಗಿ, ಸ್ವಯಂಪ್ರಕಾಶದ
ಬೆಳಗಿನೊಳಗೆ ಓಲಾಡುತ್ತಿದ್ದೆನು.
ಆ ಸ್ವಯಂಪ್ರಕಾಶದ ಬೆಳಗಿನ ಬೆಳಗನೊಳಕೊಂಡು
ಆ ಸ್ವಯಂಪ್ರಕಾಶದ ಬೆಳಗು ತಾನಾದ
ಶರಣನಪೂರ್ವವೆಂದು ಅವರ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದವು ನೋಡಾ ಶ್ರುತಿಗಳು
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Padmavondu mogge mūruṇṭu nōḍā:
Mūru vikasitavāgi, svayamprakāśada
beḷaginoḷage ōlāḍuttiddenu.
Ā svayamprakāśada beḷagina beḷaganoḷakoṇḍu
ā svayamprakāśada beḷagu tānāda
śaraṇanapūrvavendu avara śrīpādakke
namō namō enutirdavu nōḍā śrutigaḷu
apramāṇakūḍalasaṅgamadēvā.