Index   ವಚನ - 845    Search  
 
ಒಂದಾದೆನೆಂಬ ಅಣ್ಣಗಳು ನೀವು ಕೇಳಿರೆ, ಎರಡೆಂಬ ಅಣ್ಣಗಳು ನೀವು ಕೇಳಿರೆ, ಒಂದಾದಡೊಂದು ಮೋಕ್ಷವಿಲ್ಲ ಕೇಳಿರಣ್ಣಾ, ಎರಡಾದಡೆ ಬೇರಾಯಿತ್ತು ಕೇಳಿರಣ್ಣಾ. ಒಂದಾಗಿ ನಿಂದರು ಮೋಕ್ಷವಿಲ್ಲ, ಎರಡಾಗಿ ಹೋದರು ಮೋಕ್ಷವಿಲ್ಲ. ನಿಲ್ಲದೆ ನಿಂದ ನಿಲವಿಂಗೆ ನಮೋ ನಮೋ ಎಂಬೆ ನೋಡಾ ಅಪ್ರಮಾಣಕೂಡಲಸಂಗಮದೇವಾ.