ಪರಬ್ರಹ್ಮಸ್ವರೂಪವಾಗಿಹ ಪ್ರಣವದ ಬಾವಿಯೊಳಗೆ
ಪರಮಾನಂದವೆಂಬ ಜಲವಿಹುದು.
ನಿರಾಳವೆಂಬ ನೇಣಿನಲ್ಲಿ ನಿರಂಜನವೆಂಬ ಮಡಕೆಯ ಕಟ್ಟಿ,
ಪರಮಾನಂದವೆಂಬ ಜಲ ಸೇದಬಲ್ಲಾತನೆ ಶಿವಯೋಗಿ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Parabrahmasvarūpavāgiha praṇavada bāviyoḷage
paramānandavemba jalavihudu.
Nirāḷavemba nēṇinalli niran̄janavemba maḍakeya kaṭṭi,
paramānandavemba jala sēdaballātane śivayōgi nōḍā
apramāṇakūḍalasaṅgamadēvā.