ಹುಸಿವರ್ಣನಾಗಿ ಪಂಚಭೂತವಲ್ಲ,
ಉದಯಾಸ್ತಮಾನವಾಗಿಹ ಚಂದ್ರಸೂರ್ಯರಲ್ಲ,
ಆರುವರ್ಣಂಗಳಲ್ಲ, ಅರೂಪಲ್ಲ, ನಿರೂಪಲ್ಲ,
ನಿರಾಳ ನಿರಂಜನ ನಿರಾಮಯ ನಿರಾಮಯಾತೀತವ
ರೂಪೆಂದು ಕಾಬುವ ಭವಭಾರಿಗಳ
ಎಂಬತ್ತು ನಾಲ್ಕು ಲಕ್ಷಯೋನಿಯಲ್ಲಿ ತಿರುಗಿ ತಿರುಗಿ
ಹುಟ್ಟಿಸದೆ ಮಾಣ್ಬನೆ
ನಮ್ಮ ಅಪ್ರಮಾಣಕೂಡಲಸಂಗಮದೇವ?
Art
Manuscript
Music
Courtesy:
Transliteration
Husivarṇanāgi pan̄cabhūtavalla,
udayāstamānavāgiha candrasūryaralla,
āruvarṇaṅgaḷalla, arūpalla, nirūpalla,
nirāḷa niran̄jana nirāmaya nirāmayātītava
rūpendu kābuva bhavabhārigaḷa
embattu nālku lakṣayōniyalli tirugi tirugi
huṭṭisade māṇbane
nam'ma apramāṇakūḍalasaṅgamadēva?